ಅನುಷ್ಕಾ ಶರ್ಮಾ (ಜನನ 1 ಮೇ 1988) ಒಬ್ಬ ಭಾರತೀಯ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಚಿತ್ರ ನಿರ್ಮಾಣ ಮತ್ತು ನಟನೆ ಎರಡರಲ್ಲೂ ಗರಿಮೆ ಗಳಿಸಿದ್ದಾರೆ. ಅಯೋಧ್ಯೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. 2007 ರಲ್ಲಿ ವೆಂಡೆಲ್ ರಾಡ್ರಿಕ್ಸ್ ನಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಪ್ರಾರಂಭಿಸಿ ನಂತರ ಮುಂಬೈಗೆ ತೆರಳಿ ಮಾಡೆಲ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಅನುಷ್ಕಾ ಕ್ರಿಕೆಟ್ ಪಟು ವಿರಾಟ್ ಕೊಹ್ಲಿರವರ ಪತ್ನಿ. == ಬಾಲ್ಯ == ಕರ್ನಲ್ ಅಜಯ್ ಕುಮಾರ್ ಶರ್ಮಾ ಮತ್ತು ಆಶಿಮಾ ಶರ್ಮಾ ದಂಪತಿಗಳ ಎರಡನೆಯ ಮಗುವಾಗಿ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯ ನಂತರ ಮಾಡೆಲಿಂಗ್ ನ ಸೆಳೆತಕ್ಕೆ ಒಳಗಾಗಿ ಮುಂಬೈಗೆ ತೆರಳಿ, ಪ್ರಸಾದ್ ಬಿದ್ದಪ್ಪರ ಕಂಪನಿಯಲ್ಲಿ ಕಲಿಕೆ ಮತ್ತು ಕೆಲಸಗೈದರು. == ಸಿನಿಬದುಕು == ೨೦೦೭ರ ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಅನುಷ್ಕಾ,ಯಶ್ ಛೋಪ್ರಾ ನಿರ್ಮಾಣದ ರಬ್ ನೇ ಬನಾದಿ ಜೋಡಿ ಚಿತ್ರದಲ್ಲಿ ಷಾರೂಖ್ ಖಾನ್ ಜೊತೆ ನಟಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬದ್ಮಾಷ್ ಕಂಪನಿ ಮತ್ತು ಬಾಂಡ್ ಬಾಜಾ ಬಾರಾತ್, ಪಟಿಯಾಲಾ ಹೌಸ್, ಲೇಡೀಸ್ ವೆಸಸ್ ರಿಕ್ಕಿ ಬೆಹಲ್, ಹೀಗೆ ಹಲವು ಚಿತ್ರಗಳಲ್ಲಿ ಯಶ ಕಂಡ ಅನುಷ್ಕಾ, ನವದೀಪ್ ಸಿಂಗ್ ನಿರ್ದೇಶನದ "ಎನ್. ಹೆಚ್. ೧೦" ಚಿತ್ರ ನಿರ್ಮಿಸಿದರು. ಹರ್ಯಾಣದ ಅತಿದಾರುಣ ಹಳ್ಳಿ ಬದುಕಿನ ಜಂಜಾಟದಲ್ಲಿ ಸಿಲುಕಿದ ದಂಪತಿ, ೨೪ ಘಂಟೆಗಳಲ್ಲಿ ಅನುಭವಿಸುವ ನರಕಯಾತನೆಯನ್ನು, ನವವಧು ಮತ್ತು ವಿಧವೆ, ಈ ಎರಡನ್ನೂ ಎಂದೇ ದಿನ ಕಾಣುವ ತರುಣಿಯಾಗಿ ನಟಿಸಿದ ಅನುಷ್ಕಾ ಪ್ರಶಂಸೆಗೆ ಪಾತ್ರರಾದರು. == ನಾಮನಿರ್ದೇಶನ ಮತ್ತು ಪ್ರಶಸ್ತಿಗಳು == === ಚಲನಚಿತ್ರ ಪ್ರಶಸ್ತಿಗಳು === == ಫಿಲ್ಮೋಗ್ರಾಫಿ == == ಮಾಧ್ಯಮ == ಟೈಮ್ಸ್ ಆಫ್ ಇಂಡಿಯಾದ ಪ್ರಿಯಾ ಗುಪ್ತಾ "ಶರ್ಮಾ ಅವರ ಸ್ಟಾರ್‌ಡಮ್‌ನ ಉತ್ತಮ ಭಾಗವೆಂದರೆ ಅವರು ನಕ್ಷತ್ರದ ಬಲೆಗಳನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ. ಫೋರ್ಬ್ಸ್‌ಗಾಗಿ ಬರೆಯುತ್ತಿರುವ ಸಮರ್ ಶ್ರೀವಾಸ್ತವ ಅವರನ್ನು "ಭಯವಿಲ್ಲದವರು" ಎಂದು ಕರೆದರು ಮತ್ತು "ಶರ್ಮಾ ಅವರನ್ನು ಮುಖ್ಯವಾಹಿನಿಯ ಪ್ರಮುಖ ಮಹಿಳೆಯೊಬ್ಬರ ಸ್ಟೀರಿಯೊಟೈಪ್ನೊಂದಿಗೆ ಸಂಯೋಜಿಸಲು ನೀವು ಕಷ್ಟಪಡುತ್ತೀರಿ" ಎಂದು ಹೇಳಿದರು. ಟೈಮ್ಸ್ ಆಫ್ ಇಂಡಿಯಾ ಇದನ್ನು ಪ್ರಕಟಿಸಿತು". == ಗ್ಯಾಲರಿ == == ಉಲ್ಲೇಖಗಳು ==